/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಅಂಬೇಡ್ಕರ್ ಭವನ ಉದ್ಘಾಟನೆ – ಭೀಮನಗರದವರ ನಿರ್ಧಾರಕ್ಕೆ ಬದ್ದ – ಶಾಸಕ ಎ.ಆರ್. ಕೃಷ್ಣಮೂರ್ತಿ ದೃಡ ನಿಲುವು
Image

ಅಂಬೇಡ್ಕರ್ ಭವನ ಉದ್ಘಾಟನೆ – ಭೀಮನಗರದವರ ನಿರ್ಧಾರಕ್ಕೆ ಬದ್ದ – ಶಾಸಕ ಎ.ಆರ್. ಕೃಷ್ಣಮೂರ್ತಿ ದೃಡ ನಿಲುವು

ಕೊಳ್ಳೇಗಾಲ: ನವೆಂಬರ್ 29 ರಂದು ನಿಗದಿಯಾಗಿರುವ ಅಂಬೇಡ್ಕರ್ ಭವನ ಉದ್ಘಾಟನೆ ಆ ದಿನ ನಡೆಯದಿದ್ದರೆ..ಅಥವಾ ನಾನು ಹೇಳಿದ ದಿನ ಭವನ ಉದ್ಘಾಟನೆ ನಡೆದಿಲ್ಲ ಎಂಬ ಕಾರಣಕ್ಕೆ ಸಚಿವ ಹೆಚ್.ಸಿ.ಮಹಾದೇವಪ್ಪ ಅವರು ಉಳಿದಿರುವ ಕಾಮಗಾರಿ ಅನುದಾನದ ಹಣ ತಡೆಯುವುದಿಲ್ಲ. ಅಂತಹ ಸಣ್ಣತನ ಅವರು ಮಾಡುವುದಿಲ್ಲ ಎಂದು ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

ಕೊಳ್ಳೇಗಾಲ ಪಟ್ಟಣದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾವಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ಸಂಬಂಧಿಸಿದಂತೆ ಸೋಮವಾರ ಅಂಬೇಡ್ಕರ್ ಭವನದಲ್ಲಿ ನಡೆದ ಭೀಮನಗರ ಯಜಮಾನರು ಮತ್ತು ಅಂಬೇಡ್ಕರ್ ಸ್ಮಾರಕ ಸಂಘದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಕೊಳ್ಳೇಗಾಲದ ಭೀಮನಗರ ಇಡೀ ಜಿಲ್ಲೆಗೆ ಮತ್ತು ತಾಲೂಕಿನ ಹಳ್ಳಿಗಳಿಗೆ ತಾಯಿ ಇದ್ದಂತೆ. ಬಹುವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನ ಕಾಮಗಾರಿ ಅಂತಿಮ ಹಂತದಲ್ಲಿ ಇದೆ. ಇನ್ನೂ ಸಹ 2.80 ಕೋಟಿ ಅನುದಾನ ಇದೆ. ಈ ಹಣ ಬಳಕೆಯಾದರೆ ಭವನವು ಮತ್ತಷ್ಟು ಚೆನ್ನಾಗಿ ಕಾಣಲಿದೆ ಎಂದರು.

ಭವನ ಉದ್ಘಾಟನೆ ವಿಚಾರದಲ್ಲಿ ಭೀಮನಗರದಲ್ಲಿ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಇರಬಹುದು ‌ ಆದರೆ ನಾನು ಮನಸ್ಸು ಮಾಡಿದರೆ ಮುಖ್ಯ ಮಂತ್ರಿಗಳನ್ನು ಕರೆಯಿಸಿ 20 ರಂದೇ ಉದ್ಘಾಟನೆ ಮಾಡಬಹುದು. ಆದರೆ ನಾನು ಆ ರೀತಿ ಮಾಡುವುದಿಲ್ಲ.

ಭೀಮನಗರದ ಯಜಮಾನರು ಮತ್ತು ಅಂಬೇಡ್ಕರ್ ಸ್ಮಾರಕ ಸಂಘದ ಮುಖಂಡರು ಕುಳಿತು ಒಮ್ಮತದಿಂದ ನಿರ್ದಾರ ತೆಗೆದು ಕೊಳ್ಳಿ ಎಂದು ಸಲಹೆ ನೀಡಿದರು.

ಮಾದ್ಯಮದವರ ಮೇಲೆ ಅಸಮಾಧಾನ – ಅಂಬೇಡ್ಕರ್ ಭವನ ಉದ್ಘಾಟನೆ ವಿಚಾರದಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಸರಿ ಇಲ್ಲ ಎಂದರು. ಇದಕ್ಕೆ ಯೆಲ್ಲೋ ಜರ್ನಲಿಜಂ ಅನ್ನುತ್ರಾರೆ ಎಂದರು.

ದೊಡ್ಡ ಯಜಮಾನರೂ ಆಗಿರುವ ಪತ್ರಕರ್ತ ಚಿಕ್ಕಮಾಳಿಗೆ ಅವರು, ನವೆಂಬರ್ 29 ರಂದು ಅಂಬೇಡ್ಕರ್ ಭವನ ಉದ್ಘಾಟನೆ ಆಗಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದರು. ಈ ವರದಿ ಪತ್ರಿಕೆಗಳಲ್ಲಿ ಬಂದ ನಂತರ ಭೀಮನಗರದ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.

ಸಂವಿಧಾನ ಸಮರ್ಪಣ ದಿನ ನವೆಂಬರ್ 26 ರಂದು ಭವನ ಉದ್ಘಾಟನೆ ಆಗಲಿ ಎಂದು ಕೆಲವರು ಅಭಿಪ್ರಾಯ ಪಟ್ಟರು ‌ ಇನ್ನೂ ಕೆಲವರು ಭವನ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ ಆದ ಕಾರಣ ದಿನಾಂಕ ಮುಂದೂಡಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ಈ ವಿಚಾರವಾಗಿ ಭೀಮನಗರದಲ್ಲಿ ಸಹ ಕುಲಸ್ಥರು, ಯಜಮಾನರು, ಅಂಬೇಡ್ಕರ್ ಸಂಘದ ಪದಾಧಿಕಾರಿಗಳ ಸಭೆ ನಡೆಯಿತು.

ಈ ಸಭೆಯಲ್ಲಿ ಸಹ ಭೀಮನಗರದ ದೊಡ್ಡ ಯಜಮಾನ ಮತ್ತು ಪತ್ರಕರ್ತ ಚಿಕ್ಕಮಾಳಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಭೆಯಲ್ಲಿ ಬಹುತೇಕ ಮುಖಂಡರು ನವೆಂಬರ್ 29 ರಂದು ಭವನ ಉದ್ಘಾಟನೆ ಬೇಡ ಎಂದು ಅಭಿಪ್ರಾಯ ಮಂಡಿಸಿದರು. ಈ ಹಿನ್ನೆಲೆಯಲ್ಲಿ ನವೆಂಬರ್ 29 ರಂದು ನಿಗದಿಯಾಗಿದ್ದ ದಿನಾಂಕಕ್ಕೆ ಪುರಸ್ಕಾರ ಸಿಗಲಿಲ್ಲ.

ಈ ವಿಚಾರ ಸಹ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಆದರೆ ಶಾಸಕರು ಇಂದು ನಡೆದ ಸಭೆಯಲ್ಲಿ ಮಾಧ್ಯಮಗಳಲ್ಲಿ ಬಂದಿರುವ ವರದಿ ಸರಿಯಿಲ್ಲ ಎಂದು ತಿಳಿಸಿದರು.

ಆದರೆ ದೊಡ್ಡ ಯಜಮಾನರು ಆಗಿರುವ ಪತ್ರಕರ್ತ ಚಿಕ್ಕಮಾಳಿಗೆ ಅವರು ಶಾಸಕರ ಮಾತಿಗೆ ಯಾವುದೇ ಸ್ಪಷ್ಟನೆ ನೀಡದೆ ಮೌನವಹಿಸಿದ್ದರು. ಇದು ಒಂದು ರೀತಿಯಲ್ಲಿ ಪತ್ರಕರ್ತರ ಅಸಮದಾನಕ್ಕೆ ಕಾರಣವಾಯಿತು.

ವರದಿ : ನಿಂಪು ಬ್ರದರ್ಸ್

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top