/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಕೊಳ್ಳೇಗಾಲ : ಗುಂಡಾಲ್ ರಸ್ತೆ ಅಭಿವೃದ್ದಿಗಾಗಿ ರೈತ ಸಂಘ ಪ್ರತಿಭಟನೆ
Image

ಕೊಳ್ಳೇಗಾಲ : ಗುಂಡಾಲ್ ರಸ್ತೆ ಅಭಿವೃದ್ದಿಗಾಗಿ ರೈತ ಸಂಘ ಪ್ರತಿಭಟನೆ

ಕೊಳ್ಳೇಗಾಲ. ಕರ್ನಾಟಕ ರಾಜ್ಯ ರೈತ ಸಂಘ ದೊಡ್ಡಿಂದುವಾಡಿ ಹಾಗೂ ಸಿಂಗನಲ್ಲೂರು ಶಾಖೆ ರೈತರಿಂದ ಗ್ರಾಮೀಣ ಭಾಗದಲ್ಲಿ ಹಾಗೂ ಗುಂಡಾಲ್ ಜಲಾಶಯದ ಸಂಪರ್ಕ ಕಲ್ಪಿಸುವ ರಸ್ತೆ ಹಳ್ಳಗಳಿಂದ ಕೂಡಿದ್ದು ಅದನ್ನು ಅಭಿವೃದ್ಧಿ ಪಡಿಸಲು ವಿಫಲರಾಗಿರುವ ಶಾಸಕರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಬಿಕ್ಷೆ ಎತ್ತುವ ಚಳುವಳಿ ಹಮ್ಮಿಕೊಂಡಿದ್ದರು.

ತಾಲ್ಲೂಕಿನ ಕಾಮಗೆರೆ, ಸಿಂಗನಲ್ಲೂರು ಹಾಗೂ ದೊಡ್ಡಿಂದುವಾಡಿ ಭಿಕ್ಷೆ ಚಳುವಳಿ ನಡೆಸಿದರು. ಬಳಿಕ ದೊಡ್ಡಿಂದುವಾಡಿ ಗ್ರಾಮದ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದ ಪ್ರತಿಭಟನಾಕಾರರನ್ನು ಲೋಕೋಪಯೋಗಿ ಇಲಾಖೆಯ ಎಇಇ ಪುರುಷೋತ್ತಮ್, ಎಇ ಸುರೇಂದ್ರ, ಜಿ.ಪಂ ಉಪವಿಭಾಗ ಎಇಇ ಕುಮಾರ್, ಇಂಜಿನಿಯರ್ ಮಂಜು, ಕಬಿನಿ ಇಲಾಖೆ ಎಇ ರಾಮಕೃಷ್ಣ, ಪಿಡಿಒ ಮರಿಸ್ವಾಮಿ ಭೇಟಿ ನೀಡಿ ಮಾತನಾಡಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪೆರಿಯಾನಾಯಗಂ, ಮಧುವನಹಳ್ಳಿ ಬಸವರಾಜು, ಅಣಗಳ್ಳಿ ಗ್ರಾಮಘಟಕ ಕೀರ್ತಿ, ಲಾರೆನ್ಸ್, ತಾಲ್ಲೂಕು ಯುವ ಘಟಕ ಅಧ್ಯಕ್ಷರು ವಾಸು, ದೊಡ್ಡಿಂದುವಾಡಿ ಗ್ರಾಮಘಟಕ ಅಧ್ಯಕ್ಷರು ವಸಂತ ಕುಮಾರ್, ಉಪಾಧ್ಯಕ್ಷರು ಸುರೇಂದ್ರ, ಮನುಗೌಡ, ರವಿ, ನಾಗೇಂದ್ರ, ಶಿವರಾಮ್, ಗೋವಿಂದರಾಜು, ನಂದೀಶ್, ಅಬ್ದುಲ್ ಖಾದೀರ್, ಸಿಂಗನಲ್ಲೂರು ಗ್ರಾಮಘಟಕ ಅಧ್ಯಕ್ಷರು ಬೆಟ್ಟೇಗೌಡ, ಆರ್.ಅರುಪದರಾಜ್, ಜಾನ್ ಜೋಸೆಫ್,

ಭಿಕ್ಷಾಟನೆ ಮಾಡಿ ಒಟ್ಟು 3555 ರೂ.ನ್ನು ಸಂಗ್ರಹಿಸಿ ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ ಹಾಗೂ ಜಿ.ಪಂ ಇಲಾಖೆಗೆ ತಲಾ 1,185 ರೂ.ನ್ನು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ನೀಡಲು ಮುಂದಾದಾಗ ಅಧಿಕಾರಿಗಳು ಸ್ವೀಕರಿಸಿದ ಹಿನ್ನಲ್ಲೆ ಪ್ರತಿಭಟನೆ ಮುಂದುವರೆಯಿತಿತ್ತು.

ವರದಿ : ನಿಂಪು ಬ್ರದರ್ಸ್

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top