/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಕೊಳ್ಳೇಗಾಲ : ವರ್ಣರಂಜಿತ ಮಾನಸೋತ್ಸವ ನವೆಂಬರ್ 28 ರಿಂದ ಆರಂಭ
Image

ಕೊಳ್ಳೇಗಾಲ : ವರ್ಣರಂಜಿತ ಮಾನಸೋತ್ಸವ ನವೆಂಬರ್ 28 ರಿಂದ ಆರಂಭ

ನವೆಂಬರ್ 28,29,ಮತ್ತು 30 ರಂದು ಅದ್ದೂರಿಯಾಗಿ ಮಾನಸೋತ್ಸವ ಕಾರ್ಯಕ್ರಮ-ಡಾ. ದತ್ತೇಶ್

ಕೊಳ್ಳೇಗಾಲ :ಈ ಬಾರಿ ಮಾನಸ ಶಿಕ್ಷಣ ಸಂಸ್ಥೆ ವತಿಯಿಂದ ಇದೇ ತಿಂಗಳ ನವೆಂಬರ್ 28,29 ಮತ್ತು 30 ವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಮಾನಸೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅದ್ದೂರಿಯಾಗಿ ಮಾನಸೋತ್ಸವ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ದತ್ತೇಶ್ ಕುಮಾರ್ ತಿಳಿಸಿದರು.

ಪಟ್ಟಣದಲ್ಲಿರುವ ಮಾನಸ ಕಾಲೇಜು ಕಚೇರಿಯಲ್ಲಿ ನಡೆಸಲಾದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಮಾನಸೋತ್ಸವ ಕಾರ್ಯಕ್ರಮವನ್ನು, ಮೂರು ದಿನಗಳ ಕಾಲ ಬಹಳ ಅರ್ಥಪೂರ್ಣವಾಗಿ, ವಿವಿಧ ಗಣ್ಯತೀತರ ನೇತೃತ್ವದಲ್ಲಿ, ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಲಾಗುವುದು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಸಂಸ್ಥೆ ವಿದ್ಯಾರ್ಥಿಗಳಿಂದ ವಿವಿಧ ನೃತ್ಯಗಳು, ಜಾನಪದ ಕಲೆಗಳ ತವರೂರಾದ ನಮ್ಮ ಚಾಮರಾಜನಗರ ಜಿಲ್ಲಾ ಕಲಾತಂಡಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

2025ರ ದಿವಂಗತ ಆರ್. ಸಿದ್ದೇಗೌಡ ಲಿಂಗಮ್ಮನವರ ಸ್ಮರಣಾರ್ಥ ಮಾನಸ ಶಿಕ್ಷಣಸಂಸ್ಥೆ ನೀಡುವ ಮಾನಸಪ್ರಶಸ್ತಿಯನ್ನು ಡಾ. ಎಸ್. ಸೋಮನಾಥ್ ವಿಶ್ರಾಂತ ಅಧ್ಯಕ್ಷರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬೆಂಗಳೂರು ಇವರಿಗೆ ನೀಡಿ ಪುರಸ್ಕರಿಸಲಾಗುತ್ತಿದೆ. ಇಸ್ರೋ ಅಧ್ಯಕ್ಷರಾಗಿ ಏರೋ ಸ್ಪೇಸ್ ಇಂಜಿನಿಯರ್ ಆಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಇವರು ಸಲ್ಲಿಸಿರುವ ಸೇವೆ ಅಪ್ರತಿಮವಾದದ್ದು. ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಬಳಿ ವಿಕ್ರಮ್ ಎಂಬ ಲ್ಯಾಂಡರ್ ಪ್ರಜ್ಞಾನ್ ಎಂಬ ರೋವರ್ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಸಾರಥಿ ಡಾ. ಸೋಮನಾಥರವರು ಉಡಾವಣ ವಾಹನ ವಿನ್ಯಾಸಕ್ಕೆ ನೀಡಿದ ಕೊಡುಗೆಗಳಿಗೆ ಇವರು ಹೆಸರುವಾಸಿಯಾಗಿದ್ದಾರೆ. ರಚನಾತ್ಮಕ ವಿನ್ಯಾಸ, ರಚನಾತ್ಮಕ ಚಲನ ಶಾಸ್ತ್ರ ಮತ್ತು ಪೈರೋಟೆಕ್ನಿಕ್ ಕ್ಷೇತ್ರಗಳಲ್ಲಿ ಇವರ ಸೇವೆ ಗಣನೀಯವಾದದ್ದು, ಜನವರಿ 14, 2025 ರಂದು ಇಸ್ರೋ ಅಧ್ಯಕ್ಷರಾಗಿ ತಮ್ಮ ಮೂರು ವರ್ಷಗಳ ಅಧಿಕಾರ ಅವಧಿಯನ್ನು ಇಸ್ರೋ ಇತಿಹಾಸದಲ್ಲಿ ಅಜರಾಮರವಾಗಿಸಿದ್ದಾರೆ. ಯಶಸ್ವಿ ಚಂದ್ರಯಾನ-3 ಮಿಷನ್. ಆದಿತ್ಯ-LI ಉಡಾವಣೆ ಮತ್ತು ಗಗನ್ಯಾನ್ ಮುಂಭಾಗದ ಮೇಲಿನ ಪ್ರಭಾವ ಬೆಳವಣಿಗೆಗಳು ಸೋಮನಾಥ್ ರವರ ಸಾಧನೆಗೆ ಸಾಕ್ಷಿಯಾಗಿದೆ.ಎಂದರು.

2025ರ ಮಾನಸೋತ್ಸವವನ್ನು, ಒಕ್ಕಲಿಗ ಮಹಾ ಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಕರ್ನಾಟಕದ ಪ್ರಮುಖ ರಂಗಭೂಮಿ ನಿರ್ದೇಶಕರು ಮತ್ತು ನಾಟಕಕಾರರು ಆದ ಶ್ರೀ ಪ್ರಸನ್ನ ರವರು ಉದ್ಘಾಟಿಸಲಿದ್ದು, ನಮ್ಮ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ವಹಿಸಲಿದ್ದಾರೆ. ಇದೇ ವೇಳೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎನ್. ಕೆ. ಲೋಕನಾಥ್ ‘ಮಾನಸ ‘ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಈ ದಿನದ ಕಾರ್ಯಕ್ರಮಕ್ಕೆ ಇನ್ನಿತರ ಪ್ರಮುಖ ಗಣ್ಯಾತೀತರು ಕೂಡ ಆಗಿಮಿಸಲಿದ್ದಾರೆ.

29 ರಂದು, ಆದಿಚುಂಚನಗಿರಿ ಮಹಾಸಂಸ್ಥಾನ ಶಾಖ ಮಠದ, ಶ್ರೀಗಳಾದ ಶ್ರೀ ಸೋಮೇಶ್ವರನಾಥ ಸ್ವಾಮಿಗಳು ಮತ್ತು ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ, ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ ಸೋಮಣ್ಣ ರವರಿಂದ ಇಸ್ರೋ ವಿಶ್ರಾಂತ ಅಧ್ಯಕ್ಷರಾದ ಡಾ. ಎಸ್ ಸೋಮನಾಥ್ ರವರಿಗೆ ಮಾನಸ ಪ್ರಶಸ್ತಿಯನ್ನು ಪ್ರಧಾನ ಮಾಡುವರು ಮತ್ತು ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಂಪ್ಯೂಟರ್ ಲ್ಯಾಬನ್ನು ಉದ್ಘಾಟನೆಗೊಳಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜ ನಗರ ಲೋಕಸಭಾ ಕ್ಷೇತ್ರದ ಸದಸ್ಯರಾದ ಸುನಿಲ್ ಬೋಸ್ ರವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ, ಹುಣಸೂರು ಶಾಸಕ ಹರೀಶ್ ಗೌಡ, ಮುಂತಾದ ಅತಿಥಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಅದೇ ದಿನ ಮಧ್ಯಾಹ್ನ ಸುತ್ತೂರು ಮಹಾ ಸಂಸ್ಥಾನ ಮಠದ ಶ್ರೀಗಳದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾಲೇಜಿನಲ್ಲಿ ನಿರ್ಮಾಣವಾಗಿರುವ ನೂತನ ಗ್ರಂಥಾಲಯ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಶ್ರೀಗಳ ಸಮ್ಮುಖದಲ್ಲಿ ನಡೆಸಲಾಗುವುದು. ಈ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹನೂರು ಕ್ಷೇತ್ರದ ಶಾಸಕರಾದ ಎಂಆರ್ ಮಂಜುನಾಥ್ ರವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸ್ಕೃತ ವಿಶ್ವವಿದ್ಯಾನಿಲಯದ ಚಿಂತಕರಾದ ಮಲ್ಲೇಪುರಂ ಜಿ ವೆಂಕಟೇಶ್, ಮಾಜಿ ಶಾಸಕ ಎಸ್ ಬಾಲರಾಜ್, ಅಪರ ಜಿಲ್ಲಾಧಿಕಾರಿ ಜವರೇಗೌಡ ಆಗಮಿಸಿ ಕಾರ್ಯಕ್ರಮವನ್ನು ನಡೆಸಲಿದ್ದು, ರಾತ್ರಿ 7:30ಕ್ಕೆ ಸಂಯೋಜಿತ ಸಂಗೀತ ಶಾಲೆ ಅರ್ಪಿಸುವ ಜಾನಪದ ಕಲೆಗಳ ಗಾಯಕರಾದ ಮೈಸೂರು ಗುರುರಾಜ್ ಮತ್ತು ಶಾಲೋಮ್ ಸನ್ನುತ ರವರಿಂದ ಗೀತ ಗಾಯನ ಕಾರ್ಯಕ್ರಮವನ್ನು ನಡೆಸಲಿದ್ದಾರೆ.

ನವೆಂಬರ್ 30ರಂದು ಕುಂದೂರು ಮಠದ ಶ್ರೀಗಳಾದ ಶ್ರೀ ಶರತ್ ಚಂದ್ರ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪರಿದು ಸಾಧನೆಗೈದ 350 ವಿದ್ಯಾರ್ಥಿಗಳಿಗೆ, ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾದ ಡಾ. ಸಿ ಎನ್ ಅಶ್ವಥ್ ನಾರಾಯಣ್ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಮಾಜಿ ಸಚಿವ ಎನ್ ಮಹೇಶ್ ರವರಿಂದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ಮರಜನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ಆರ್. ಗಂಗಾಧರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ಎಚ್ ಎನ್ ಪುಟ್ಟಗೌರಮ್ಮ, ಡಿ ವೈ ಎಸ್ ಪಿ ಧರ್ಮೇಂದ್ರ ರವರ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.

ಒಟ್ಟಾರೆ ಮೂರು ದಿನಗಳ ಕಾಲ ನಡೆಯಲಿರುವ ಮಾನತೋತ್ಸವ ಕಾರ್ಯಕ್ರಮಕ್ಕೆ, ವಿದ್ಯಾರ್ಥಿಗಳು, ಪೋಷಕರು, ಮುಂತಾದ ಜನಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ, ವಿವಿಧ ಗಾಯನ ಕಾರ್ಯಕ್ರಮ, ಮತ್ತು ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಉಪಹಾರ ವ್ಯವಸ್ಥೆ ಮಾಡಲಾಗಿದ್ದು ಎಲ್ಲರ ಸಹಕಾರದಿಂದ ಮನಸೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡಬೇಕು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ , ದಿನೇಶ್ ಕುಮಾರ್, ಕೃಷ್ಣೇಗೌಡ,, ಧನಂಜಯ್, ಚನ್ನಶೆಟ್ರು, ಜಗದೀಶ್, ಶಂಕರ್,ನಯನ ಬಾಬು, ಮುಂತಾದವರು ಉಪಸ್ಥಿತರಿದ್ದರು.

ವರದಿ : ನಿಂಪು ಬ್ರದರ್ಸ್

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top