/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಹೊಸ ಹಂಪಾಪುರ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
Image

ಹೊಸ ಹಂಪಾಪುರ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕೊಳ್ಳೇಗಾಲ :
ಹೊಸ ಹಂಪಾಪುರದ ಕರವೇ ಗ್ರಾಮ ಘಟಕದಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಕೊಳ್ಳೇಗಾಲ:ತಾಲೂಕಿನ ಹೊಸ ಹಂಪಾಪುರ ಗ್ರಾಮದಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಕೊಳ್ಳೇಗಾಲ ತಾಲೂಕು ಹಂಪಾಪುರ ಗ್ರಾಮ ಘಟಕದ ವತಿಯಿಂದ ವತಿಯಿಂದ ಗ್ರಾಮದಲ್ಲಿರುವ ಮೋದಿ ಸರ್ಕಲ್ ನಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.

ಕಾರ್ಯಕ್ರಮದ ಧ್ವಜಾರೋಹಣ ಕಾರ್ಯಕ್ರಮವನ್ನು ಕರವೇ( ಪ್ರವೀಣ್ ಶೆಟ್ಟಿ ಬಣ )ತಾಲೂಕು ಘಟಕದ ಅಧ್ಯಕ್ಷರಾದ ಜಗದೀಶ್ ಶಾಸ್ತ್ರೀ ಯವರು ಮತ್ತು ಕರವೇ ಪದಾಧಿಕಾರಿಗಳು ನೆರೆವೇರಿಸಿದರು. ಬಳಿಕ ಕನ್ನಡಾಂಬೆ ತಾಯಿ ಭುವನೇಶ್ವರಿ ಭಾವಚಿತ್ರ ಕ್ಕೆ ಪುಷ್ಪರ್ಚನೆ ಮಾಡಿ ಪೂಜೆ ಸಲ್ಲಿಸಿ, ಕಾರ್ಯಕ್ರಮಕ್ಕೆ ಭಾಗವಹಿಸಿದ ಗ್ರಾಮದ ಮುಖಂಡರು ಮತ್ತು ಸಾರ್ವಜನಿಕರಿಗೆ ಕರವೇ ಪದಾಧಿಕಾರಿಗಳು ಸಿಹಿ ವಿತರಣೆ ಮಾಡಿ, ಅನ್ನ ಸಂತರ್ಪಣೆ ಮಾಡಿದರು.

ಬಳಿಕ ಕರವೇ ತಾಲೂಕು ಘಟಕದ ಅಧ್ಯಕ್ಷರಾದ ಜಗದೀಶ್ ಶಾಸ್ತ್ರೀ ಮಾತನಾಡಿ, ಕನ್ನಡ ಎಂಬುದು ಬರಿ ಭಾಷೆಯಲ್ಲ, ಅದು ನಮ್ಮ ರಕ್ತ. ಇಂತಹ ಗಂಧದನಾಡು, ಸಾಂಸ್ಕೃತಿಕ ಕಲೆಗಳ ಬೀಡು, ಅಚ್ಚ ಹಸುರಿನ ನಾಡು ನಮ್ಮ ಕರುನಾಡು. ಇಂತಹ ನಾಡಿನಲ್ಲಿ ಜನಿಸಿರುವು ನಮ್ಮ ಸೌಭಾಗ್ಯ. ನಮ್ಮ ನಾಡಿನ ಭಾಷೆ, ನೆಲ, ಜಲ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಕನ್ನಡ ನಾಡಿನ ಭಾಷೆ, ನೆಲ ರಕ್ಷಣೆ, ನೊಂದ ಜನರ ರಕ್ಷಣೆಗೆ ಬದ್ದ. ಕನ್ನಡದ ವಿಷಯದಲ್ಲಿ ಯಾವುದೇ ಸಮಸ್ಯೆ ಬಂದರೆ ನಮ್ಮ ಕರವೇ ಪಡೆ ಸದಾ ಹೋರಾಟಕ್ಕೆ ಸದಾ ಸಿದ್ದ. ಹಾಗೆಯೇ ಕನ್ನಡ ರಾಜ್ಯೋತ್ಸವವನ್ನು ಪ್ರತಿ ಗ್ರಾಮಗಳಲ್ಲಿ ಎಲ್ಲರೂ ವಿಜೃಂಭಣೆಯಿಂದ ಆಚರಿಸಬೇಕೆಂದು ಕರೆ ನೀಡಿದರು.
ಕರವೇ ಗ್ರಾಮ ಘಟಕದ ಅಧ್ಯಕ್ಷ ರೇವಣ್ಣ ನಾಯಕ ಮಾತನಾಡ, ನಾವೆಲ್ಲ ಕನ್ನಡ ನಾಡಿನ ಮಕ್ಕಳು, ಕನ್ನಡದ ರಕ್ಷಣೆಗೆ, ನೊಂದ ಜನರಿಗೆ ನ್ಯಾಯ ಕೊಡಿಸಲು ಎಂತಹ ಪರಿಸ್ಥಿತಿಯಲ್ಲೂ ಹೋರಾಟಕ್ಕೆ ಸಿದ್ದ. ಯುವಕರು, ಹಿರಿಯರು, ಪ್ರತಿಯೊಬ್ಬರೂ ಕನ್ನಡ ರಾಜ್ಯೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಿ ನಮ್ಮ ಕನ್ನಡ ನಾಡಿಗೆ ಗೌರವ ಸಲ್ಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ, ಕರವೇ ತಾಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರೀ, ರೈತ ಮುಖಂಡ ಅಣಗಳ್ಳಿ ಬಸವರಾಜು, ಗ್ರಾ. ಪಂ ಅಧ್ಯಕ್ಷ ನಾಗರಾಜು,ಕರವೇ ಹಂಪಾಪುರ ಗ್ರಾಮ ಘಟಕದ ಅಧ್ಯಕ್ಷ ರೇವಣ್ಣ ನಾಯಕ, ಯಜಮಾನರಾದ ಪುಟ್ಟಸ್ವಾಮಿನಾಯಕ, ನಾಗರಾಜು, ಶಿವಣ್ಣ, ಗೋಪಾಲನಾಯಕ,ಮಹೇಶ್, ಮೂರ್ತಿ, ರಂಗಸ್ವಾಮಿ ನಾಯಕ, ಗುರುಮಾಲ್ಲ ನಾಯಕ, ಹಾಗೂ ಯುವಕರು ಗ್ರಾಮಸ್ಥರು ಉಪಸ್ಥಿತರಿದ್ದರು

ವೆರದಿ : ನಿಂಪು ಬ್ರದರ್ಸ್

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top