/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಹನೂರು – ನಾಗಣ್ಣ ನಗರ ಕಂದಾಯ ಗ್ರಾಮ ಮಾಡಲು ಶಾಸಕ ಎಂ.ಆರ್. ಮಂಜುನಾಥ್ ಭರವಸೆ
Image

ಹನೂರು – ನಾಗಣ್ಣ ನಗರ ಕಂದಾಯ ಗ್ರಾಮ ಮಾಡಲು ಶಾಸಕ ಎಂ.ಆರ್. ಮಂಜುನಾಥ್ ಭರವಸೆ

ಕಂದಾಯ ಇಲಾಖೆ ಮುಖಾಂತರ ಸರ್ಕಾರಕ್ಕೆ ನಾಗಣ್ಣ ನಗರ ಕಂದಾಯ ಗ್ರಾಮವಾಗಿ ಪರಿವರ್ತಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಉಳಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಲು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ಶಾಸಕ ಎಂಆರ್ ಮಂಜುನಾಥ್ ಗ್ರಾಮಸ್ಥರಿಗೆ ತಿಳಿಸಿದರು …

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದಲ್ಲಿ ನಾಗಣ್ಣ ನಗರ ಗ್ರಾಮಸ್ಥರು ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು …

ರಾಜ್ಯ ಸರ್ಕಾರ ನಾಗಣ್ಣ ನಗರ ಮಾದರಿಯಲ್ಲಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಇಡೀ ರಾಜ್ಯದಲ್ಲಿಯೇ ಸಮಸ್ಯೆ ಇರುವ ಕಡೆ ಕಂದಾಯ ಇಲಾಖೆ ಮುಖಾಂತರ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ ನಮ್ಮ ತಾಲೂಕಿನಲ್ಲಿರುವ ಸಮಸ್ಯೆ ಬಗ್ಗೆ ಸಹ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಬಂದ ತಕ್ಷಣ ಗ್ರಾಮಕ್ಕೆ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು .

ನಾಗಣ್ಣ ನಗರದ ನಿವಾಸಿಗಳು ಸಮಸ್ಯೆಗಳ ಸುರಿಮಳೆಯನ್ನೇ ಶಾಸಕರ ಮುಂದೆ ಹೇಳುವ ಮೂಲಕ ಮನವಿ ಸಲ್ಲಿಸಿದರು ಇದೇ ವೇಳೆಯಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತು ಶೌಚಾಲಯಗಳಿಲ್ಲದೆ ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಗ್ರಾಮಗಳಿಗೆ ಮಾತ್ರ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಅನುಕೂಲ ಕಲ್ಪಿಸುತ್ತಿದೆ ಹೀಗಾಗಿ ಶೌಚ ನಿರ್ಮಾಣ ಮಾಡಿಕೊಳ್ಳಲು ಕ್ರಮ ಕೈಗೊಳ್ಳಿ ಗ್ರಾಮದಲ್ಲಿ ಇರುವ ನಿವಾಸಿಗಳಿಗೆ ಪಡಿತರ ಚೀಟಿ ಮತ್ತು ಸರ್ಕಾರಿ ಸವಲತ್ತು ಪಡೆಯಲು ತೊಂದರೆಯಾಗಿದೆ ಮತ್ತು ಗ್ರಾಮ ಪಂಚಾಯಿತಿ ವತಿಯಿಂದ ಮನೆಗಳಿಗೆ ಈ ಸ್ವತ್ತು ಪಡೆಯಲು ಸಹ ಆಗದೇ ಇರುವುದರಿಂದ ಕಳೆದ 40 ವರ್ಷಗಳಿಂದಲೂ ಗ್ರಾಮದ ಜನತೆ ಜನಪ್ರತಿನಿಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ ಇನ್ನು ಕ್ರಮ ಕೈಗೊಳ್ಳದೆ ಇರುವುದು ನಮ್ಮ ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಕ್ರಮ ಕೈಗೊಳ್ಳುವಂತೆ ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಹ ಸಾರಿಗೆ ವ್ಯವಸ್ಥೆ ಇಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು ..

ಸಾರಿಗೆ ವ್ಯವಸ್ಥಾಪಕರನ್ನು ಗ್ರಾಮಸ್ಥರ ಬಳಿ ಕರೆದು ಇವರಿಗೆ ಬೇಕಾಗಿರುವ ಸಾರಿಗೆ ವ್ಯವಸ್ಥೆಯನ್ನು ಶಾಲಾ-ಕಾಲೇಜಿನ ಮಕ್ಕಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ಬೆಳಗ್ಗೆ ಮತ್ತು ಸಂಜೆ ಕಲ್ಪಿಸುವಂತೆ ಸೂಚನೆ ನೀಡಿದರು ಜೊತೆಗೆ ರಾಮಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ಗ್ರಾಮಸ್ಥರಿಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ನೀಡಲು ಹಿರಿಯ ಅಧಿಕಾರಿಗಳ ಜೊತೆ ಸರ್ಕಾರದ ಜೊತೆ ಮಾತನಾಡಿ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಹೀಗಾಗಿ ಇತರೆ ಗ್ರಾಮಗಳ ನಿವಾಸಿಗಳಿಗೆ ಸಿಗುವಂತ ಸೌಲತ್ತುಗಳನ್ನು ಸಹ ನಾಗಣ್ಣ ನಗರ ಗ್ರಾಮದ ನಿವಾಸಿಗಳಿಗೆ ನೀಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು .

ಮೂಲಭೂತ ಸೌಲಭ್ಯಗಳಿಗೆ ಅಸ್ತು ಶಾಸಕರ ಭರವಸೆ : ಗ್ರಾಮದಲ್ಲಿರುವ ಮೂಲಭೂತ ಸೌಲಭ್ಯಗಳನ್ನು ನೀಡಲು ಗ್ರಾಮದ ಪ್ರತಿಯೊಬ್ಬರು ತಮ್ಮ ಸಮಸ್ಯೆಗಳನ್ನು ಪಟ್ಟಿ ಮಾಡಿ ಮುಖಂಡರ ಮುಖಾಂತರ ಅಧಿಕಾರಿಗಳ ಮುಖಾಂತರ ನೀಡಿದರೆ ಅಂತಹ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು …

ಇದೇ ಸಂದರ್ಭದಲ್ಲಿ ಮುಖಂಡರಾದ ಮುರುಗೇಶ್ ಗ್ರಾಮ ಪಂಚಾಯಿತಿ ಸದಸ್ಯ ಕುಂಜುಮನ್ ಮಾದೇವಿ ಮದಮ್ಮ ಬಾಗಮ್ಮ ತಂಗಮ್ಮ ಇನ್ನಿತರರು ಇದ್ದರು. .

ವರದಿ : ನಿಂಪು ಬ್ರದರ್ಸ್

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top