/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಕೊಳ್ಳೇಗಾಲದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಗುದ್ದಲಿ ಪೂಜೆ
Image

ಕೊಳ್ಳೇಗಾಲದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಗುದ್ದಲಿ ಪೂಜೆ

ಕೊಳ್ಳೇಗಾಲ. ಸುದ್ದಿ

ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ, ಎ. ಅರ್ ಕೃಷ್ಣಮೂರ್ತಿ

ಕೊಳ್ಳೇಗಾಲ ವಿಧಾನಸಭಾ ವ್ಯಾಪ್ತಿಗೆ ಸೇರಿದ
ತಾಲ್ಲೂಕಿನ ಮುಳ್ಳೂರು, ಹೊಸ ಹಂಪಪುರ ಹಾಗೂ ಹರಳೆ ಗ್ರಾ.ಪಂ ವ್ಯಾಪ್ತಿಗೆ ಸೇರಿದ ವಿವಿಧ ಗ್ರಾಮಗಳಲ್ಲಿ ಸುಮಾರು 83 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಭೂಮಿ ಪೂಜೆ ನೆರವೇರಿಸಿದರು

ಮುಳ್ಳೂರು ಗ್ರಾಮದಲ್ಲಿ ನಬಾರ್ಡ್ ಯೋಜನೆಯಡಿ 17 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ, ನಾಯಕರ ಬೀದಿಯಲ್ಲಿ 18 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ , ಉಪ್ಪಾರ ಬೀದಿಯಲ್ಲಿ 10 ಲಕ್ಷ ವೆಚ್ಚದಲ್ಲಿ ರಸ್ತೆ , ಪರಿಶಿಷ್ಟ ಜಾತಿ ಬೀದಿಯಲ್ಲಿ 10 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ಮುಂದುವರೆದ ಕಾಮಗಾರಿ ಹಾಗೂ ಹೊಸ ಹಂಪಾಪುರ 6 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಹಾಗೂ ದಾಸನಪುರ 6 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಹಾಗೂ ಹರಳೆ ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಮುಂದುವರೆದ ಕಾಮಗಾರಿ, ನಾಯಕರ ಬೀದಿಯಲ್ಲಿ 6 ವೆಚ್ಚದಲ್ಲಿ ಸಿ.ಸಿ ರಸ್ತೆ ಕಾಮಗಾರಿಗಳಿಗೆ ಶಾಸಕರು ಗುದ್ದಲಿಪೂಜೆ ನಡೆಸಿದರು.

ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಶಾಸಕರು ಮಾತನಾಡಿ ನಾನು ಶಾಸಕನಾಗಿ ಎರಡೂವರೆ ವರ್ಷಗಳು ಆಗುತ್ತಿದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ನಂತರ ಮೊದಲು ಕೊಟ್ಟಿದ್ದ 25 ಕೋಟಿ ಅನುದಾನದಲ್ಲಿ ಕ್ಷೇತ್ರ ಎಲ್ಲಾ ಸಮುದಾಯದ ಎಲ್ಲಾ ವರ್ಗದ ಸಮುದಾಯ ಭವನಗಳು ಮುಂದುವರಿದ ಕಾಮಗಾರಿಗಳಿಗೆ ಅನುದಾನವನ್ನು ಕೊಡಲಾಗಿದೆ ನಂತರ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳಿಗೆ 5 ಕೋಟಿ, 77 ಲಕ್ಷದ 18 ಸಾವಿರ ಅನುದಾನವನ್ನ ಸುಮಾರು 38 ಗ್ರಾಮಗಳಲ್ಲಿ, ಸಿಸಿ ರಸ್ತೆ, ಚರಂಡಿ ನಿರ್ಮಾಣ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಹಾಕಿ ಕೊಡಲಾಗಿದೆ, ಅದರಲ್ಲಿ ಮುಳ್ಳೂರು ಗ್ರಾಮ ನಾಯಕರ ಬೀದಿಯಲ್ಲಿ 18 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ , ಉಪ್ಪಾರ ಬೀದಿಯಲ್ಲಿ 10 ಲಕ್ಷ ವೆಚ್ಚದಲ್ಲಿ ರಸ್ತೆ , ಪರಿಶಿಷ್ಟ ಜಾತಿ ಬೀದಿಯಲ್ಲಿ 10 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ಮುಂದುವರೆದ ಕಾಮಗಾರಿ ಹಾಗೂ ಹೊಸ ಹಂಪಾಪುರ 6 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಹಾಗೂ ದಾಸನಪುರ 6 ಲಕ್ಷ ವೆಚ್ಚದಲ್ಲಿ ಸಿ.ಸಿ ರಸ್ತೆ ಹಾಗೂ ಹರಳೆ ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಮುಂದುವರೆದ ಕಾಮಗಾರಿ, ನಾಯಕರ ಬೀದಿಯಲ್ಲಿ 6 ವೆಚ್ಚದಲ್ಲಿ ಸಿ.ಸಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಕಾಮಗಾರಿ ಚಾಲನೆಯನ್ನು ನೀಡಲಾಗಿದೆ

ಕೊಟ್ಟಿರುವ ಅನುದಾನದಲ್ಲಿ ಎಷ್ಟು ಆಗುತ್ತೋ ಅಷ್ಟು ಕೆಲಸವನ್ನು ಮಾಡಿ ನಂತರ ಉಳಿಕೆ ಕಾಮಗಾರಿಗಳಿಗೆ ಹೆಚ್ಚಿನ ಅನುದಾನಗಳನ್ನು ಬಿಡುಗಡೆ ಮಾಡಿಸಲಾಗುವುದು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ನುಡಿದಂತೆನಡೆದ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿಗಳನ್ನ ಘೋಷಣೆ ಮಾಡಿ ಸರ್ಕಾರ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಆದ್ದರಿಂದ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನತೆಗೆ ತುಂಬಾ ಅನುಕೂಲವಾಗಿದೆ, ಸಂವಿಧಾನ ಬದ್ದವಾಗಿ ಪಾರದರ್ಶಕವಾದ ಆಡಳಿತ ಮಾಡುವ ಸರ್ಕಾರ ನಮ್ಮ ಕಾಂಗ್ರೆಸ್ ಸರ್ಕಾರ, ಬಾಬಾ ಸಾಹೇಬರ ಕನಸಿನಂತೆ ಎಲ್ಲಾ ವರ್ಗದ ಎಲ್ಲಾ ಸಮುದಾಯದ ಜನರಿಗೂ ಸಾಮಾಜಿಕ ನ್ಯಾಯವನ್ನು ಕೊಡಬೇಕು ಎಂಬಾ ಕಾರಣದಿಂದ ಎಲ್ಲಾ ವರ್ಗದವರಿಗೂ ಕೂಡ ಪಕ್ಷದಲ್ಲಿ ಅವಕಾಶಗಳನ್ನು ಮಾಡಿ ಕೊಡಲಾಗಿದೆ, ಎಂದರು

ಈ ಸಂಧರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಾಜೇಂದ್ರ, ಮುಳ್ಳೂರು ಗ್ರಾ.ಪಂ ಅಧ್ಯಕ್ಷರು ಕಮಲ, ಉಪಾಧ್ಯಕ್ಷರಾದ ದೊರೆರಾಜು, ಹರಳೆ ಗ್ರಾ.ಪಂ ಅಧ್ಯಕ್ಷರು ನಾಗರಾಜು, ಪಿಡಿಒ ರಾಜಮ್ಮಣಿ, ತೋಟೇಶ್, ಪಿಎಸಿಸಿ ನಿರ್ದೇಶಕರು ಮುಳ್ಳೂರು ಮಂಜುನಾಥ್, ಚೇತನ್ ದೊರೆ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಜಿ.ಪಂ ಉಪವಿಭಾಗ ಎಇಇ ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಪುರುಷೋತ್ತಮ್, ಸಿಡಿಪಿಒ ಅಂಬಿಕಾ, ಪಿಡಿಒ ಸವಿತಾ, ಕೆ.ಆರ್.ಐ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ, ನಿರ್ಮಿತಿ ಕೇಂದ್ರ ಸಹಾಯಕ ಯೋಜನಾ ವ್ಯವಸ್ಥಾಪಕ ಪ್ರತಾಪ್ ಹಾಗೂ ಇತರರು ಇದ್ದರು.

ವರದಿ: ನಿಂಪು ರಾಜೇಶ್

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top