/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಭೀಮನಗರದ ದೊಡ್ಡ ಯಜಮಾನರು ಮತ್ತು ಅಂಬೇಡ್ಕರ್ ಸಂಘದ ಅಧ್ಯಕ್ಷರ ಪತ್ರಿಕಾ ಹೇಳಿಕೆಗೆ ಮನ್ನಣೆ ನೀಡದ ಮುಖಂಡರು : ಅಂಬೇಡ್ಕರ್ ಭವನ ಉದ್ಘಾಟನೆ ಮುಂದೂಡಿಕೆ
Image

ಭೀಮನಗರದ ದೊಡ್ಡ ಯಜಮಾನರು ಮತ್ತು ಅಂಬೇಡ್ಕರ್ ಸಂಘದ ಅಧ್ಯಕ್ಷರ ಪತ್ರಿಕಾ ಹೇಳಿಕೆಗೆ ಮನ್ನಣೆ ನೀಡದ ಮುಖಂಡರು : ಅಂಬೇಡ್ಕರ್ ಭವನ ಉದ್ಘಾಟನೆ ಮುಂದೂಡಿಕೆ

ಕೊಳ್ಳೇಗಾಲ: ಅಪೂರ್ಣ ಗೊಂಡಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನವನ್ನು ಇದೇ ತಿಂಗಳು 29 ರಂದು ಉದ್ಘಾಟನೆ ಮಾಡುವುದಾಗಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದ ಭೀಮನಗರ ದೊಡ್ಡ ಯಜಮಾನ ಮತ್ತು ಅಂಬೇಡ್ಕರ್ ಸಂಘದ ಅಧ್ಯಕ್ಷರ ಹೇಳಿಕೆಯನ್ನು ಭೀಮನಗರದ ಮುಖಂಡರು ಒಮ್ಮತದಿಂದ ವಿರೋಧಿಸಿದ್ದು, ಬಹುತೇಕ ಮುಖಂಡರ ಅಭಿಪ್ರಾಯವನ್ನು ಸ್ವೀಕರಿಸಿ ಭವನದ ಉದ್ಘಾಟನೆ ದಿನಾಂಕವನ್ನು ಮುಂದೂಡಲಾಯಿತು.

ಭೀಮನಗರದ ಬಸವನಗುಡಿ ದೇವಸ್ಥಾನದಲ್ಲಿ ಶನಿವಾರ ಭೀಮನಗರ ಕುಲಸ್ಥರು, ಯಜಮಾನರು, ಮತ್ತು ಅಂಬೇಡ್ಕರ್ ಸಂಘದ ಪದಾಧಿಕಾರಿಗಳ ಸಮಕ್ಷಮ ಸಭೆ ಕರೆಯಲಾಗಿತ್ತು.

ಈ ವೇಳೆ ಭೀಮನಗರದ ಯಜಮಾನರು ಮುಖಂಡರ ಅಭಿಪ್ರಾಯಗಳನ್ನು ಕೇಳಿದರು. ಆಗ ಬಹುತೇಕ ಮುಖಂಡರು ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ಹೇಳಿ, ಭವನ ಕಾಮಗಾರಿ ಅಪೂರ್ಣ ಗೊಂಡಿರುವುದರಿಂದ ಯಾವುದೇ ಕಾರಣಕ್ಕೂ ನವೆಂಬರ್ 29 ರಂದು ಉದ್ಘಾಟನೆ ಬೇಡ, ಸಂಪೂರ್ಣ ಕಾಮಗಾರಿ ಆದ ನಂತರವೇ ಉದ್ಘಾಟನೆ ಮಾಡುವುದು ಸೂಕ್ತ ಎಂದರು.

ಅಲ್ಲದೆ, ಹಿಂದಿನಿಂದಲೂ ಭೀಮನಗರದಲ್ಲಿ ಯಾವುದೇ ನಿರ್ಣಯ ತೆಗೆದು ಕೊಂಡರು.. ಬಸವನಗುಡಿಯಲ್ಲಿ ಸಭೆ ಸೇರಿ ಕುಲಸ್ಥರು ಒಮ್ಮತದಿಂದ ನಿರ್ಧಾರ ತೆಗೆದು ಕೊಳ್ಳುತ್ತಿದ್ದರು, ಮುಂದೆಯೂ ಇದೇ ಪರಂಪರೆ ನಡೆಯಬೇಕು. ಬೇರೆ ಸ್ಥಳಗಳಲ್ಲಿ ಕುಳಿತು ಭೀಮನಗರದ ವಿಚಾರಗಳ ಬಗ್ಗೆ ನಿರ್ಧಾರ ತೆಗೆದು ಕೊಳ್ಳಬಾರದು ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಓರ್ವ ಮುಖಂಡ ಮಾತನಾಡಿ, ನಮ್ಮ ಯಜಮಾನರು ಮತ್ತು ಕುಲದ ಗಮನಕ್ಕೆ ತರದೆ ಅಂಬೇಡ್ಕರ್ ಭವನ ಉದ್ಘಾಟನೆ ದಿನಾಂಕ ನಿಗದಿ ಮಾಡಲಾಗಿದೆ ಎಂದರು. ಈ ಮಾತಿಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು. ಭೀಮನಗರದ ದೊಡ್ಡ ಯಜಮಾನರೇ, ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದು ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪ ಆಯಿತು.

ಅಂತಿಮವಾಗಿ ಭೀಮನಗರದ ಯಜಮಾನರು ಅಂಬೇಡ್ಕರ್ ಭವನ ಉದ್ಘಾಟನೆ 29 ರಂದು ನಡೆಯಬೇಕಿದ್ದ ಕಾರ್ಯಕ್ರಮ ಮುಂದೂಡುವ ನಿರ್ಧಾರ ತೆಗೆದು ಕೊಂಡರು. ಇದರಿಂದ ಒಂದು ಹಂತದಲ್ಲಿ ನಿರಾಶೆ ಒಳಗಾದ ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಬಗ್ಗೆ ಸಭೆಯಲ್ಲಿ ತಿಳಿಸಿದರು. ನಂತರದಲ್ಲಿ ಮುಖಂಡರು ಅವರನ್ನು ಸಮಾಧಾನ ಮಾಡಿದರು ಎಂದು ತಿಳಿದು ಬಂದಿದೆ

ವರದಿ: ನಿಂಪು ಬ್ರದರ್ಸ್

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top