/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಚಾಮರಾಜನಗರ : ಕಿಡಿಗೇಡಿ ಆರೋಪಿಗಳ ಬಂಧನಕ್ಕೆ ಒತ್ತಾಯ
Image

ಚಾಮರಾಜನಗರ : ಕಿಡಿಗೇಡಿ ಆರೋಪಿಗಳ ಬಂಧನಕ್ಕೆ ಒತ್ತಾಯ

ಚಾಮರಾಜನಗರ
ಬುದ್ಧನ ಪ್ರತಿಮೆ ಹಾಗೂ ಅಂಬೇಡ್ಕರ್‌ ಪ್ಲೆಕ್ಸ್ ವಿರೂಪಗೊಳಿಸಿರುವ ಘಟನೆಯ ತಪ್ಪಿತಸ್ಥರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ವೀರಣ್ಣ ಮತ್ತು ರಾಘವೇಂದ್ರ ಪ್ರಸನ್ನ ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು 24ರಂದು ಜ್ಯೋತಿಗೌಡನ ಪುರ ಗ್ರಾಮದಲ್ಲಿ ಬುದ್ಧನ ಪ್ರತಿಮೆ ಮತ್ತು ಅಂಬೇಡ್ಕರ್‌ ಪ್ಲೆಕ್ಸ್ ವಿರೂಪಗೊಳಿಸಿರುವ ಘಟನೆಯನ್ನು ಗ್ರಾಮಸ್ಥರು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಗಮನಕ್ಕೆ ತಂದು ಈ ಕೃತ್ಯ ಎಸಗಿರುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದೆವು ಎಂದು ತಿಳಿಸಿದರು.
ಘಟನೆ ನಡೆದು ಕೆಲದಿನಗಳು ಕಳೆದ ನಂತರ ಒಬ್ಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸ್‌ ಇಲಾಖೆ ಮಾಹಿತಿ ನೀಡಿದೆ. ಆದರೆ ಈ ಘಟನೆ ಒಬ್ಬ ವ್ಯಕ್ತಿಯಿಂದ ಈ ಕೃತ್ಯಸಾಧ್ಯವಲ್ಲ, ಇದರ ಹಿಂದೆ ಕಾಣದ ಕೈಗಳ ಕೆಲಸವಿದೆ ಎಂದು ಪೊಲೀಸ್‌ ಇಲಾಖೆಗೆ ಅಭಿಪ್ರಾಯ ತಿಳಿಸಿದ್ದೇವು ಆದರೆ ಬಂಧಿತ ವ್ಯಕ್ತಿಯನ್ನು ಅಪರಾಧಿ ಅಲ್ಲ ಎಂದು ಗ್ರಾಮದವರು ಹೇಳಿಲ್ಲ ಆದರೆ ಗ್ರಾಮದವರೆ ಆ ವ್ಯಕ್ತಿ ಅಲ್ಲ ಎಂದು ಹೇಳಿದ್ದಾರೆ ಎಂದು ಸುಳ್ಳು ವದಂತಿ ಹಬ್ಬಿಸಿದ್ದಾರೆ ಎಂದರು.
ಬಂಧಿತ ವಕ್ತಿ ನಾಯಕ ಸಮಾಜದ ವ್ಯಕ್ತಿಯಾಗಿದ್ದಾನೆ ಎಂಬ ಕಾರಣಕ್ಕೆ ನಾಯಕ ಸಮಾಜ ಅಂಬೇಡ್ಕರ್ ವಿರೋಧಿಗಳು ಎಂದು ಯಾರು ಹೇಳಿಲ್ಲ, ಆದರೂ ಕೂಡ ನಾಯಕ ಸಮಾಜದವರು ನ.15ರಂದು ನಾಯಕ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ನಾಯಕ ಸಮಾಜ ಆಂಬೇಡ್ಕರ್‌ ವಿರೋಧಿಯಲ್ಲ ವಿರೂಪಗೊಳಿಸಿದ ನಿಜವಾದ ಆರೋಪಿಯನ್ನು ಬಂಧಿಸಿ ಎಂದು ಮನವಿ ಸಲ್ಲಿಸಿದ್ದು ನಂತರ ಸಭೆಯಲ್ಲಿ ನಮ್ಮ ಸಮಾಜದ ಬಗ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸುತ್ತೇವೆ ಎಂದರು.
ಅಂಬೇಡ್ಕರ್‌ ಅವರು ಮಿಷನ್‌ಗನ್ ಕೊಟ್ಟಿಲ್ಲ, ನಮಗೆ ಪೆನ್ನು ಕೊಟ್ಟಿದ್ದಾರೆ ಮಿಷನ್‌ಗನ್‌ ನಮಗೆ ಬೇಕಿಲ್ಲ ಪೆನ್ನು ಸಾಕು ನ್ಯಾಯ ಪಡೆದುಕೊಳ್ಳಲು ನಮ್ಮ ಸಮಾಜದ ಬಗ್ಗೆ ಮಾತನಾಡಿದ್ದಕ್ಕೆ ನಮ್ಮ ಸಮಾಜದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಸೋಮನಾಯಕ ಅವರ ಹೇಳಿಕೆ ಖಂಡಿಸಿದ್ದಾರೆ ನಾಯಕ ಸಮಾಜವನ್ನು ಎಲ್ಲೂ ದೂಷಿಸಿಲ್ಲ ಆದರೆ ಶಿವು ವಿರಾಟ್‌ ಅವರು ಶಿವಕುಮಾರ್‌ ಅವರ ಮೇಲೆ ವಾಗ್ದಾಳಿ ಮಾಡಿರುವುದು ಸರಿಯಲ್ಲ, ನಾಯಕ ಸಮಾಜದವರು ನಾವು ಗ್ರಾಮದಲ್ಲಿ ಅಣ್ಣ ತಮ್ಮಂದಿರಂತೆ ಇದ್ದೇವೆ ತಪ್ಪಿತಸ್ಥರು ಯಾರೇ ಆಗಿರಲಿ ಪೊಲೀಸ್ ಇಲಾಖೆ ಬಂಧಿಸಲಿ ಅವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಮನವಿ ಮಾಡುತ್ತೇವೆ ಎಂದರು.

ವರರದಿ : ನಿಂಪು ಬ್ರದರ್ಸ್

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top