/* Change button hover color to red */
button:hover,
.wp-block-button__link:hover,
input[type="submit"]:hover {
    background-color: red !important;
    color: #fff !important; /* Makes text white for contrast */
}

  • Home
  • ಜಿಲ್ಲೆ
  • ಹನೂರು: ಜಿಲ್ಲಾಧಿಕಾರಿ ಶಿಲ್ಪನಾಗ್ ಭರವಸೆಯಿಂದ ಶಾಲೆಗೆ ಹಾಜರಾದ ಪೆದ್ದನಪಾಳ್ಯ ಶಾಲೆ ಮಕ್ಕಳು
Image

ಹನೂರು: ಜಿಲ್ಲಾಧಿಕಾರಿ ಶಿಲ್ಪನಾಗ್ ಭರವಸೆಯಿಂದ ಶಾಲೆಗೆ ಹಾಜರಾದ ಪೆದ್ದನಪಾಳ್ಯ ಶಾಲೆ ಮಕ್ಕಳು

ಹನೂರು ತಾಲ್ಲೂಕಿನ ಪೆದ್ದನಪಾಳ್ಯ ಗ್ರಾಮದಲ್ಲಿ ಇರುವ ಸರ್ಕಾರಿ ಶಾಲೆಯ ಜಾಗ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಟ್ಟಡ ನಿರ್ಮಾಣ ಸಾಧ್ಯವಾಗಿಲ್ಲ. ಜೊತೆಗೆ ಕುಡಿಯುವ ನೀರು, ಶೌಚಗೃಹ ಸೌಲಭ್ಯಗಳಿಲ್ಲದ ಕಾರಣದಿಂದ ಆಗಸ್ಟ್ 11ರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಆ.14ರಂದು ಜಿಲ್ಲಾಮಟ್ಟದ ಅಧಿಕಾರಿಗಳಾದ ಜಿಪಂ ಸಿಇಒ ಮೋನಾ ರೋತ್, ಡಿಡಿಪಿಐ ರಾಮಚಂದ್ರರಾಜೇ ಅರಸ್, ತಹಸೀಲ್ದಾರ್ ಚೈತ್ರಾ, ಬಿಇಒ ಗುರುಲಿಂಗಯ್ಯ ಹಾಗೂ ತಾಪಂ ಇಒ ಉಮೇಶ್ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಸಮಸ್ಯೆ ಬಗೆಹರಿಸಲು ವಾಗ್ದಾನ ನೀಡಲಾಗಿದ್ದರೂ, ಸ್ಪಷ್ಟ ನಿರ್ಧಾರವಾಗದ ಕಾರಣ ಪೋಷಕರ ಅಸಮಾಧಾನ ಮುಂದುವರಿದಿತ್ತು.

ಬುಧವಾರದಂದು ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ ಅವರು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರು ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ತಾತ್ಕಾಲಿಕವಾಗಿ ಕೊಠಡಿಗಳನ್ನು ರಿಪೇರಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಒಟ್ಟು 62 ವಿದ್ಯಾರ್ಥಿಗಳ ಪೈಕಿ 50 ಮಕ್ಕಳು ಹಾಜರಿದ್ದು ಸಂತಸದ ವಿಚಾರವಾಗಿದೆ.

Releated Posts

ಕೊಳ್ಳೇಗಾಲ ಭೀಮನಗರದ ಮೈಸೂರಿನಲ್ಲಿ ಇರುವ ಗುಪ್ತಚರ ಎಎಸ್ಐ ಶಿವಕುಮಾರ್ ಗೆ ಮುಖ್ಯಮಂತ್ರಿ ಗಳ ಚಿನ್ನದ ಪದಕ

ಕೊಳ್ಳೇಗಾಲ/ ಮೈಸೂರು : ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಹಾಲಿ ಮೈಸೂರಿನಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಸ್.ಶಿವಕುಮಾರ್ ಅವರು ಮುಖ್ಯಮಂತ್ರಿ ಗಳ ಪದಕ…

ByByN Rajesh Apr 3, 2026

ಕೊಳ್ಳೇಗಾಲ : ಮಹಿಳಾ ಸಬಲೀಕರಣದಿಂದ ಕುಟುಂಬದ ಅಭಿವೃದ್ಧಿ – ಶಾಸಕ ಎ.ಆರ್. ಕೃಷ್ಣಮೂರ್ತಿ

ಕೊಳ್ಳೇಗಾಲ. ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವತಿಯಿಂದ ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿದ್ದರು. ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಇಂದು…

ByByN Rajesh Apr 1, 2026

ನಿವೃತ್ತಿಯಾದ ಸೆಸ್ಕಾಂ ಎಇಇ ಎಂ ರಾಜು ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ನಿವೃತ್ತಿಯಾದ ಸೆಸ್ಕ್ ಎಇಇ ಎಂ.ರಾಜುಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಕೊಳ್ಳೇಗಾಲ : ಸೇವೆಯಿಂದ ನಿವೃತ್ತಿ ಹೊಂದಿದ ಕೊಳ್ಳೇಗಾಲ ಸೆಸ್ಕಾಂ ಉಪವಿಭಾಗದ ಎಇಇ ಎಂ.ರಾಜು ಅವರಿಗೆ…

ByByN Rajesh Mar 31, 2026

Leave a Reply

Your email address will not be published. Required fields are marked *

Scroll to Top